Friday, 30 October 2026
ತಾಜಾ ಸುದ್ದಿ
ವಿಶ್ವ ಪಾರ್ಶ್ವವಾಯು ದಿನ: ಜಾಗೃತಿ, ಆರಂಭಿಕ ಪತ್ತೆ ಮತ್ತು ಸೂಕ್ತ ಚಿಕಿತ್ಸೆಯಿಂದ ಅಂಗವೈಕಲ್ಯದ ಅಪಾಯ ತಗ್ಗಿಸಬಹುದುಕ್ಯಾಂಡಿ ಕ್ರಷ್‌ನಲ್ಲಿ ಕರ್ನಾಟಕದ ಸೂರ್ಯ ರಾಜ್ ವಿಶ್ವದಾಖಲೆ: 23,585ನೇ ಹಂತ ತಲುಪಿ ಸಾಧನೆಬ್ರಿಟಿಷರ ವಿರುದ್ಧದ ಕಿತ್ತೂರು ರಾಣಿ ಚೆನ್ನಮ್ಮನವರ ವಿಜಯಕ್ಕೆ 202 ವರ್ಷ: ಸಂಸತ್ ಆವರಣದ ಪ್ರೇರಣಾ ಸ್ಥಳದಲ್ಲಿ ಸಂಭ್ರಮದ ಆಚರಣೆವಿಶ್ವ ಥ್ರಾಂಬೋಸಿಸ್ ದಿನ 2026: ಮಹಿಳೆಯರ ಜೀವನದ ಪ್ರತಿ ಹಂತದಲ್ಲೂ ಬದಲಾಗುವ ರಕ್ತ ಹೆಪ್ಪುಗಟ್ಟುವಿಕೆಯ ಅಪಾಯಬೆಂಗಳೂರಿನ ಮೆಡಿಕವರ್ ಆಸ್ಪತ್ರೆಯಲ್ಲಿ ನವಜಾತ ಶಿಶುವಿಗೆ ಮರುಜೀವ: 85 ನಿಮಿಷಗಳಲ್ಲಿ ತುರ್ತು ಸ್ಥಳಾಂತರ, 33 ದಿನಗಳ ಚಿಕಿತ್ಸೆಯ ಬಳಿಕ ಸಂಪೂರ್ಣ ಚೇತರಿಕೆ‘ಕಾಯೋಣ, ನೋಡೋಣ’ ಎನ್ನಬೇಡಿ: ಜ್ವರ, ಕುತ್ತಿಗೆ ಬಿಗಿತ ಮತ್ತು ಅಸಹಜ ನಿದ್ರೆ ಮೆನಿಂಜೈಟಿಸ್‌ನ ಸೂಚನೆಯಾಗಿರಬಹುದುಹೃದಯದ ಆರೋಗ್ಯದತ್ತ ಮತ್ತೊಂದು ಹೆಜ್ಜೆ: ಮೆಡಿಕವರ್ ಆಸ್ಪತ್ರೆಗಳಿಂದ ₹999ಕ್ಕೆ ವಿಶೇಷ ಹಾರ್ಟ್ ಸ್ಕ್ರೀನಿಂಗ್ ಪ್ಯಾಕೇಜ್ಆರೋಗ್ಯಕರ ಹೃದಯಕ್ಕಾಗಿ ಮೆಡಿಕವರ್ ಆಸ್ಪತ್ರೆಯಲ್ಲಿ ‘ಲವ್ ಯುವರ್ ಹಾರ್ಟ್ 2.0’ ವಾಕಥಾನ್ವಿಶ್ವ ಪಾರ್ಶ್ವವಾಯು ದಿನ: ಜಾಗೃತಿ, ಆರಂಭಿಕ ಪತ್ತೆ ಮತ್ತು ಸೂಕ್ತ ಚಿಕಿತ್ಸೆಯಿಂದ ಅಂಗವೈಕಲ್ಯದ ಅಪಾಯ ತಗ್ಗಿಸಬಹುದುಕ್ಯಾಂಡಿ ಕ್ರಷ್‌ನಲ್ಲಿ ಕರ್ನಾಟಕದ ಸೂರ್ಯ ರಾಜ್ ವಿಶ್ವದಾಖಲೆ: 23,585ನೇ ಹಂತ ತಲುಪಿ ಸಾಧನೆಬ್ರಿಟಿಷರ ವಿರುದ್ಧದ ಕಿತ್ತೂರು ರಾಣಿ ಚೆನ್ನಮ್ಮನವರ ವಿಜಯಕ್ಕೆ 202 ವರ್ಷ: ಸಂಸತ್ ಆವರಣದ ಪ್ರೇರಣಾ ಸ್ಥಳದಲ್ಲಿ ಸಂಭ್ರಮದ ಆಚರಣೆವಿಶ್ವ ಥ್ರಾಂಬೋಸಿಸ್ ದಿನ 2026: ಮಹಿಳೆಯರ ಜೀವನದ ಪ್ರತಿ ಹಂತದಲ್ಲೂ ಬದಲಾಗುವ ರಕ್ತ ಹೆಪ್ಪುಗಟ್ಟುವಿಕೆಯ ಅಪಾಯಬೆಂಗಳೂರಿನ ಮೆಡಿಕವರ್ ಆಸ್ಪತ್ರೆಯಲ್ಲಿ ನವಜಾತ ಶಿಶುವಿಗೆ ಮರುಜೀವ: 85 ನಿಮಿಷಗಳಲ್ಲಿ ತುರ್ತು ಸ್ಥಳಾಂತರ, 33 ದಿನಗಳ ಚಿಕಿತ್ಸೆಯ ಬಳಿಕ ಸಂಪೂರ್ಣ ಚೇತರಿಕೆ‘ಕಾಯೋಣ, ನೋಡೋಣ’ ಎನ್ನಬೇಡಿ: ಜ್ವರ, ಕುತ್ತಿಗೆ ಬಿಗಿತ ಮತ್ತು ಅಸಹಜ ನಿದ್ರೆ ಮೆನಿಂಜೈಟಿಸ್‌ನ ಸೂಚನೆಯಾಗಿರಬಹುದುಹೃದಯದ ಆರೋಗ್ಯದತ್ತ ಮತ್ತೊಂದು ಹೆಜ್ಜೆ: ಮೆಡಿಕವರ್ ಆಸ್ಪತ್ರೆಗಳಿಂದ ₹999ಕ್ಕೆ ವಿಶೇಷ ಹಾರ್ಟ್ ಸ್ಕ್ರೀನಿಂಗ್ ಪ್ಯಾಕೇಜ್ಆರೋಗ್ಯಕರ ಹೃದಯಕ್ಕಾಗಿ ಮೆಡಿಕವರ್ ಆಸ್ಪತ್ರೆಯಲ್ಲಿ ‘ಲವ್ ಯುವರ್ ಹಾರ್ಟ್ 2.0’ ವಾಕಥಾನ್
ಆರೋಗ್ಯ

ಬೆಂಗಳೂರಿನ ಮೆಡಿಕವರ್ ಆಸ್ಪತ್ರೆಯಲ್ಲಿ ನವಜಾತ ಶಿಶುವಿಗೆ ಮರುಜೀವ: 85 ನಿಮಿಷಗಳಲ್ಲಿ ತುರ್ತು ಸ್ಥಳಾಂತರ, 33 ದಿನಗಳ ಚಿಕಿತ್ಸೆಯ ಬಳಿಕ ಸಂಪೂರ್ಣ ಚೇತರಿಕೆ

ಬೆಂಗಳೂರು:
ಆಂಧ್ರಪ್ರದೇಶದ ಮದನಪಲ್ಲಿಯ ನವಜಾತ ಶಿಶುವೊಂದಕ್ಕೆ ಸಂಭವಿಸಿದ್ದ ಗಂಭೀರ ಆರೋಗ್ಯ ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸಿದ ವೈದ್ಯರು, ಕೇವಲ 85 ನಿಮಿಷಗಳಲ್ಲಿ ವಿಶೇಷ ಅಂಬ್ಯೂಲೆನ್ಸ್ ಮೂಲಕ ಮಗುವನ್ನು ಬೆಂಗಳೂರಿನ ಮೆಡಿಕವರ್ ಆಸ್ಪತ್ರೆಗೆ ರವಾನಿಸಿ, ಬರೋಬ್ಬರಿ 33 ದಿನಗಳ ಸುದೀರ್ಘ ಚಿಕಿತ್ಸೆಯ ನಂತರ ಮಗುವನ್ನು ಸಂಪೂರ್ಣವಾಗಿ ಗುಣಮುಖಗೊಳಿಸಿ ಮನೆಗೆ ಕಳುಹಿಸಿದ್ದಾರೆ. ಈ ಕುರಿತು ಇಂದು ಮೆಡಿಕವರ್ ಆಸ್ಪತ್ರೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವೈದ್ಯರು ಹಾಗೂ ಆಡಳಿತ ಮಂಡಳಿ ವಿವರ ಹಂಚಿಕೊಂಡರು. 

ಏನಿದು ಪ್ರಕರಣ?
ಆಂಧ್ರಪ್ರದೇಶದ ಮದನಪಲ್ಲಿ ಮೂಲದ ಬಾಲೆ ರಜನಿ ಅವರ ನವಜಾತ ಹೆಣ್ಣು ಮಗು ಹುಟ್ಟಿದ ತಕ್ಷಣವೇ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿತ್ತು. ಮಗುವಿನ ಶ್ವಾಸಕೋಶದಲ್ಲಿ ಮಲದ ಅಂಶ ಪ್ರವೇಶಿಸಿ (ಮೆಕೋನಿಯಂ ಆಸ್ಪಿರೇಷನ್ ಸಿಂಡ್ರೋಮ್) ಹಾಗೂ ಶ್ವಾಸಕೋಶ ಗಾಳಿ ಸೋರಿಕೆಯಿಂದ ಬ್ಲಾಕ್ ಆಗಿದ್ದರಿಂದ (ನಿಮೊಥೊರಾಕ್ಸ್) ಮಗುವಿನ ಸ್ಥಿತಿ ಅತ್ಯಂತ ಚಿಂತಾಜನಕವಾಗಿತ್ತು. ಕೂಡಲೇ ಮಗುವನ್ನು ಅತ್ಯಾಧುನಿಕ ಲೈಫ್ ಸಪೋರ್ಟ್ ಸೌಲಭ್ಯವಿದ್ದ ‘ವಿಶೇಷ ಅಂಬ್ಯೂಲೆನ್ಸ್’ ನಲ್ಲಿ ಮದನಪಲ್ಲಿಯಿಂದ ಕೇವಲ 85 ನಿಮಿಷಗಳಲ್ಲಿ ಬೆಂಗಳೂರಿನ ವೈಟ್‌ಫೀಲ್ಡ್‌ನ ಮೆಡಿಕವರ್ ಆಸ್ಪತ್ರೆಗೆ ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು. 

ವೈದ್ಯರ ಹೇಳಿಕೆ:
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ವೈದ್ಯರಾದ ಡಾ. ಶಿವಶಂಕರ್ ದಿಗ್ಗಿಕ್ಕರ್ ಹಾಗೂ ಡಾ. ಲತೀಶ್, “ಮಗು ಆಸ್ಪತ್ರೆಗೆ ಬಂದಾಗ ಉಸಿರಾಟದ ವ್ಯವಸ್ಥೆ ಹಾಗೂ ರಕ್ತದೊತ್ತಡ ಸಂಪೂರ್ಣ ಕ್ಷೀಣಿಸಿತ್ತು. ತಕ್ಷಣವೇ ಮಗುವನ್ನು ನವಜಾತ ಶಿಶುಗಳ ತೀವ್ರ ನಿಗಾ ಘಟಕಕ್ಕೆ (NICU) ದಾಖಲಿಸಿ, ಕೃತಕ ಉಸಿರಾಟದ ಯಂತ್ರ (HFOV High-Frequency Oscillatory Ventilation), ಇನ್‌ಹೇಲ್ಡ್ ನೈಟ್ರಿಕ್ ಆಕ್ಸೈಡ್ (iNO) ಮತ್ತು ದ್ರವ ಚಿಕಿತ್ಸೆ ನೀಡಲಾಯಿತು. ಮಗುವಿಗೆ ಉಸಿರಾಟದ ಸಮಸ್ಯೆಯ ಜೊತೆಗೆ ಉಂಟಾಗಿದ್ದ ಶ್ವಾಸಕೋಶದ ಸಂಕೋಚನ (Laryngomalacia) ಮತ್ತಿತರ ಸವಾಲುಗಳನ್ನು 33 ದಿನಗಳ ಚಿಕಿತ್ಸೆಯ ಮೂಲಕ ನಿವಾರಿಸಲಾಗಿದೆ. ಪ್ರಸ್ತುತ ಮಗು ಸಂಪೂರ್ಣ ಚೇತರಿಸಿಕೊಂಡಿದ್ದು, ಆರೋಗ್ಯವಾಗಿದ್ದಾಳೆ,” ಎಂದು ವಿವರಣೆ ನೀಡಿದರು. 

ಮೆಡಿಕವರ್ ಆಸ್ಪತ್ರೆಯ ಪ್ರಾದೇಶಿಕ ನಿರ್ದೇಶಕರಾದ (Regional Director) ಸಿದ್ದಾರೆಡ್ಡಿ ಮಾತನಾಡಿ, “ಅತ್ಯಂತ ಸಂಕೀರ್ಣ ಹಾಗೂ ಚಾಲೆಂಜಿಂಗ್ ಆಗಿದ್ದ ಈ ಪ್ರಕರಣವನ್ನು ನಮ್ಮ ನಿಪುಣ ವೈದ್ಯರ ತಂಡ ಯಶಸ್ವಿಯಾಗಿ ನಿಭಾಯಿಸಿದೆ. ತುರ್ತು ಸಮಯದಲ್ಲಿ ಕ್ಷಣಾರ್ಧದಲ್ಲಿ ಕಾರ್ಯಪ್ರವೃತ್ತರಾಗಿ ಮಗುವಿನ ಪ್ರಾಣ ಉಳಿಸಿದ್ದು ನಮಗೆ ಹೆಮ್ಮೆಯ ವಿಷಯ. ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಮತ್ತಷ್ಟು ಸುಧಾರಿತ ‘ಪಿಡಿಯಾಟ್ರಿಕ್ ಕಾರ್ಡಿಯಾಲಜಿ’ (ಮಕ್ಕಳ ಹೃದಯರೋಗ) ವಿಭಾಗವನ್ನು ಶೀಘ್ರದಲ್ಲೇ ಆರಂಭಿಸಲಿದ್ದೇವೆ,” ಎಂದು ಪ್ರಕಟಿಸಿದರು.
ಪೋಷಕರ ಕಣ್ಣೀರು-ಸಂತಸ:
33 ದಿನಗಳ ಸತತ ಹೋರಾಟದ ಬಳಿಕ ತಮ್ಮ ಮಗು ಪುನರ್ಜನ್ಮ ಪಡೆದು ನಗೆಬೀರುತ್ತಿರುವುದನ್ನು ಕಂಡು ಮಗುವಿನ ತಂದೆ ಹಾಗೂ ಕುಟುಂಬಸ್ಥರು ಕಣ್ಣೀರಿಟ್ಟು ಸಂತಸ ವ್ಯಕ್ತಪಡಿಸಿದರು. “ಸರಿಯಾದ ಸಮಯಕ್ಕೆ ಅಂಬ್ಯೂಲೆನ್ಸ್ ವ್ಯವಸ್ಥೆ ಮಾಡಿ, ತಾಯಿಯಂತೆ ಮಗುವನ್ನು ಆರೈಕೆ ಮಾಡಿದ ಮೆಡಿಕವರ್ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗೆ ನಾವು ಚಿರಋಣಿ” ಎಂದು ಧನ್ಯವಾದ ತಿಳಿಸಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಆಸ್ಪತ್ರೆಯ ಸೆಂಟರ್ ಹೆಡ್ ಶ್ರೀವಲ್ಲಿ, ವೈದ್ಯರಾದ ಡಾ. ಶಿವಶಂಕರ್ ದಿಗ್ಗಿಕ್ಕರ್, ಡಾ. ಲತೀಶ್, ರೀಜನಲ್ ಡೈರೆಕ್ಟರ್ ಸಿದ್ದಾರೆಡ್ಡಿ ಹಾಗೂ ಮಗುವಿನ ಪೋಷಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *