Friday, 30 October 2026
ತಾಜಾ ಸುದ್ದಿ
ವಿಶ್ವ ಪಾರ್ಶ್ವವಾಯು ದಿನ: ಜಾಗೃತಿ, ಆರಂಭಿಕ ಪತ್ತೆ ಮತ್ತು ಸೂಕ್ತ ಚಿಕಿತ್ಸೆಯಿಂದ ಅಂಗವೈಕಲ್ಯದ ಅಪಾಯ ತಗ್ಗಿಸಬಹುದುಕ್ಯಾಂಡಿ ಕ್ರಷ್‌ನಲ್ಲಿ ಕರ್ನಾಟಕದ ಸೂರ್ಯ ರಾಜ್ ವಿಶ್ವದಾಖಲೆ: 23,585ನೇ ಹಂತ ತಲುಪಿ ಸಾಧನೆಬ್ರಿಟಿಷರ ವಿರುದ್ಧದ ಕಿತ್ತೂರು ರಾಣಿ ಚೆನ್ನಮ್ಮನವರ ವಿಜಯಕ್ಕೆ 202 ವರ್ಷ: ಸಂಸತ್ ಆವರಣದ ಪ್ರೇರಣಾ ಸ್ಥಳದಲ್ಲಿ ಸಂಭ್ರಮದ ಆಚರಣೆವಿಶ್ವ ಥ್ರಾಂಬೋಸಿಸ್ ದಿನ 2026: ಮಹಿಳೆಯರ ಜೀವನದ ಪ್ರತಿ ಹಂತದಲ್ಲೂ ಬದಲಾಗುವ ರಕ್ತ ಹೆಪ್ಪುಗಟ್ಟುವಿಕೆಯ ಅಪಾಯಬೆಂಗಳೂರಿನ ಮೆಡಿಕವರ್ ಆಸ್ಪತ್ರೆಯಲ್ಲಿ ನವಜಾತ ಶಿಶುವಿಗೆ ಮರುಜೀವ: 85 ನಿಮಿಷಗಳಲ್ಲಿ ತುರ್ತು ಸ್ಥಳಾಂತರ, 33 ದಿನಗಳ ಚಿಕಿತ್ಸೆಯ ಬಳಿಕ ಸಂಪೂರ್ಣ ಚೇತರಿಕೆ‘ಕಾಯೋಣ, ನೋಡೋಣ’ ಎನ್ನಬೇಡಿ: ಜ್ವರ, ಕುತ್ತಿಗೆ ಬಿಗಿತ ಮತ್ತು ಅಸಹಜ ನಿದ್ರೆ ಮೆನಿಂಜೈಟಿಸ್‌ನ ಸೂಚನೆಯಾಗಿರಬಹುದುಹೃದಯದ ಆರೋಗ್ಯದತ್ತ ಮತ್ತೊಂದು ಹೆಜ್ಜೆ: ಮೆಡಿಕವರ್ ಆಸ್ಪತ್ರೆಗಳಿಂದ ₹999ಕ್ಕೆ ವಿಶೇಷ ಹಾರ್ಟ್ ಸ್ಕ್ರೀನಿಂಗ್ ಪ್ಯಾಕೇಜ್ಆರೋಗ್ಯಕರ ಹೃದಯಕ್ಕಾಗಿ ಮೆಡಿಕವರ್ ಆಸ್ಪತ್ರೆಯಲ್ಲಿ ‘ಲವ್ ಯುವರ್ ಹಾರ್ಟ್ 2.0’ ವಾಕಥಾನ್ವಿಶ್ವ ಪಾರ್ಶ್ವವಾಯು ದಿನ: ಜಾಗೃತಿ, ಆರಂಭಿಕ ಪತ್ತೆ ಮತ್ತು ಸೂಕ್ತ ಚಿಕಿತ್ಸೆಯಿಂದ ಅಂಗವೈಕಲ್ಯದ ಅಪಾಯ ತಗ್ಗಿಸಬಹುದುಕ್ಯಾಂಡಿ ಕ್ರಷ್‌ನಲ್ಲಿ ಕರ್ನಾಟಕದ ಸೂರ್ಯ ರಾಜ್ ವಿಶ್ವದಾಖಲೆ: 23,585ನೇ ಹಂತ ತಲುಪಿ ಸಾಧನೆಬ್ರಿಟಿಷರ ವಿರುದ್ಧದ ಕಿತ್ತೂರು ರಾಣಿ ಚೆನ್ನಮ್ಮನವರ ವಿಜಯಕ್ಕೆ 202 ವರ್ಷ: ಸಂಸತ್ ಆವರಣದ ಪ್ರೇರಣಾ ಸ್ಥಳದಲ್ಲಿ ಸಂಭ್ರಮದ ಆಚರಣೆವಿಶ್ವ ಥ್ರಾಂಬೋಸಿಸ್ ದಿನ 2026: ಮಹಿಳೆಯರ ಜೀವನದ ಪ್ರತಿ ಹಂತದಲ್ಲೂ ಬದಲಾಗುವ ರಕ್ತ ಹೆಪ್ಪುಗಟ್ಟುವಿಕೆಯ ಅಪಾಯಬೆಂಗಳೂರಿನ ಮೆಡಿಕವರ್ ಆಸ್ಪತ್ರೆಯಲ್ಲಿ ನವಜಾತ ಶಿಶುವಿಗೆ ಮರುಜೀವ: 85 ನಿಮಿಷಗಳಲ್ಲಿ ತುರ್ತು ಸ್ಥಳಾಂತರ, 33 ದಿನಗಳ ಚಿಕಿತ್ಸೆಯ ಬಳಿಕ ಸಂಪೂರ್ಣ ಚೇತರಿಕೆ‘ಕಾಯೋಣ, ನೋಡೋಣ’ ಎನ್ನಬೇಡಿ: ಜ್ವರ, ಕುತ್ತಿಗೆ ಬಿಗಿತ ಮತ್ತು ಅಸಹಜ ನಿದ್ರೆ ಮೆನಿಂಜೈಟಿಸ್‌ನ ಸೂಚನೆಯಾಗಿರಬಹುದುಹೃದಯದ ಆರೋಗ್ಯದತ್ತ ಮತ್ತೊಂದು ಹೆಜ್ಜೆ: ಮೆಡಿಕವರ್ ಆಸ್ಪತ್ರೆಗಳಿಂದ ₹999ಕ್ಕೆ ವಿಶೇಷ ಹಾರ್ಟ್ ಸ್ಕ್ರೀನಿಂಗ್ ಪ್ಯಾಕೇಜ್ಆರೋಗ್ಯಕರ ಹೃದಯಕ್ಕಾಗಿ ಮೆಡಿಕವರ್ ಆಸ್ಪತ್ರೆಯಲ್ಲಿ ‘ಲವ್ ಯುವರ್ ಹಾರ್ಟ್ 2.0’ ವಾಕಥಾನ್
ರಾಜ್ಯ

ಬ್ರಿಟಿಷರ ವಿರುದ್ಧದ ಕಿತ್ತೂರು ರಾಣಿ ಚೆನ್ನಮ್ಮನವರ ವಿಜಯಕ್ಕೆ 202 ವರ್ಷ: ಸಂಸತ್ ಆವರಣದ ಪ್ರೇರಣಾ ಸ್ಥಳದಲ್ಲಿ ಸಂಭ್ರಮದ ಆಚರಣೆ

ನವದೆಹಲಿ, ಅಕ್ಟೋಬರ್ 23, 2026 : ಪ್ರತಿವರ್ಷದಂತೆ, ನವದೆಹಲಿಯ ಸಂಸತ್ ಆವರಣದಲ್ಲಿನ ಪ್ರೇರಣಾ ಸ್ಥಳದಲ್ಲಿ ಕಿತ್ತೂರು ರಾಣಿ ಚೆನ್ನಮ್ಮನವರ ಜನ್ಮ ಜಯಂತಿ ಮತ್ತು 202ನೇ ವಿಜಯೋತ್ಸವವನ್ನು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ಹಾಗೂ ತುಮಕೂರು ಸಂಸದ ಶ್ರೀ ವಿ. ಸೋಮಣ್ಣ ಅವರ ನೇತೃತ್ವದಲ್ಲಿ ಇಂದು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ರಾಣಿ ಚೆನ್ನಮ್ಮನವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಲು ಲೋಕಸಭಾ ಸ್ಪೀಕರ್ ಶ್ರೀ ಓಂ ಬಿರ್ಲಾ, ಕೇಂದ್ರ ಜಲಶಕ್ತಿ ಸಚಿವ ಶ್ರೀ ಸಿ.ಆರ್. ಪಾಟೀಲ್, ಸಂಸದ ಶ್ರೀ ಪಿ.ಸಿ. ಮೋಹನ್, ಡಾ. ಸುಧಾಕರ್, ಮಾಜಿ ಸಚಿವರಾದ ಶ್ರೀ ಮುರಗೇಶ್ ನಿರಾಣಿ, ಶ್ರೀ ಬಸನಗೌಡ ಪಾಟೀಲ್ ಯತ್ನಾಳ್, ಕರ್ನಾಟಕ ರಾಜ್ಯದ ಮಾಜಿ ನವದೆಹಲಿ ವಿಶೇಷ ಪ್ರತಿನಿಧಿ ಶ್ರೀ ಶಂಕರಗೌಡ ಪಾಟೀಲ್, ಕೂಡಲಸಂಗಮದ ಪೂಜ್ಯ ಶ್ರೀ ಬಸವ ಮೃತ್ಯುಂಜಯ ಸ್ವಾಮೀಜಿ, ಶ್ರೀ ಶಂಕರಾನಂದ ಸ್ವಾಮೀಜಿ, ಶ್ರೀ ಸಿದ್ದಾರೂಢರ ಮಠ, ಆಳೂರು, ಬೀದರ್, ಶ್ರೀ ಆತ್ಮಾರಾಮ ಸ್ವಾಮೀಜಿ, ಶ್ರೀ ಗುರುದೇವ ಆಶ್ರಮ, ಕಕ್ಕಮರಿ, ಶ್ರೀ ವಿನಾಯಕ ಸ್ವಾಮೀಜಿ, ಶ್ರೀ ಸಿದ್ದಾರೂಢ ಮಠ, ಚಳಕಾಪುರ ಹಾಗೂ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿದ ಕನ್ನಡಿಗರು ಮತ್ತು ದೆಹಲಿಯ ಅಪಾರ ಸಂಖ್ಯೆಯ ಕನ್ನಡಿಗರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ವಿ. ಸೋಮಣ್ಣ ಅವರು, “ರಾಷ್ಟ್ರ ಕಂಡ ಅಪ್ರತಿಮ ಮಹಿಳಾ ಸೇನಾನಿ, ಕಿತ್ತೂರು ಮಹಾ ಸಂಸ್ಥಾನದ ವೀರವನಿತೆ ರಾಣಿ ಚೆನ್ನಮ್ಮನವರ ಜನ್ಮದಿನೋತ್ಸವ ಹಾಗೂ ಬ್ರಿಟಿಷರ ವಿರುದ್ಧದ ಅವರ 202ನೇ ವರ್ಷದ ವಿಜಯೋತ್ಸವದ ಸಂಭ್ರಮದಲ್ಲಿ ದೇಶದ ಜನತೆಗೆ ಹೃತ್ಪೂರ್ವಕ ಶುಭಾಶಯಗಳು” ಎಂದು ಕೋರಿದರು.

ರಾಣಿ ಚೆನ್ನಮ್ಮನ ಪ್ರತಿಮೆಗೆ ಪುಷ್ಪನಮನ ಸಲ್ಲಿಸುವ ಈ ಕಾರ್ಯಕ್ರಮಕ್ಕೆ ಆಗಮಿಸಿ, ತಮ್ಮ ಗೌರವ ಉಪಸ್ಥಿತಿಯಿಂದ ಕಾರ್ಯಕ್ರಮಕ್ಕೆ ಮೆರುಗು ನೀಡಿದ ಲೋಕಸಭಾ ಸ್ಪೀಕರ್ ಶ್ರೀ ಓಂ ಬಿರ್ಲಾ ಅವರಿಗೆ ಹಾಗೂ ಕೇಂದ್ರ ಜಲಶಕ್ತಿ ಸಚಿವ ಶ್ರೀ ಸಿ.ಆರ್. ಪಾಟೀಲ್ ಅವರಿಗೆ ನಾಡಿನ ಸಮಸ್ತ ಜನರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿದರು.

“ಕಿತ್ತೂರು ರಾಣಿ ಚೆನ್ನಮ್ಮ ಕೇವಲ ಯುದ್ಧ ಮಾಡಿದ ರಾಣಿಯಲ್ಲ, ಅವರು ಒಂದು ಸಾಮ್ರಾಜ್ಯಶಾಹಿ ಶಕ್ತಿಗೆ ಸವಾಲೆಸೆದು, ಪ್ರತಿರೋಧದ ಅಮರ ಸಂಕೇತವಾಗಿ ಇತಿಹಾಸದಲ್ಲಿ ಉಳಿದ ವೀರ ಮಹಿಳೆ. ಇಂತಹ ವೀರ ಮಹಿಳೆಯ ಸಾಧನೆಯನ್ನು ಸಂಭ್ರಮಿಸುವ ಅವಕಾಶ ನಮಗೆ ಸಿಕ್ಕಿರುವುದು ಅತ್ಯಂತ ಸಂತೋಷದ ಸಂಗತಿ” ಎಂದು ಸಚಿವರು ನುಡಿದರು.

“ಭಾರತೀಯ ಸಂಸತ್ತಿನ ಈ ಪವಿತ್ರ ಸ್ಥಳದಲ್ಲಿ ವೀರವನಿತೆ ರಾಣಿ ಚೆನ್ನಮ್ಮನವರ ಶೌರ್ಯ, ಧೈರ್ಯ, ಕಿಚ್ಚು ಇಂದು ದೇಶ ಕಾಯುವ ವೀರರಿಗೆ ಸ್ಫೂರ್ತಿ. ನಾಡು-ನುಡಿ ಅಭಿಮಾನವುಳ್ಳ ನಮ್ಮ ನಿಮ್ಮೆಲ್ಲರಿಗೂ ಇದು ಕೀರ್ತಿ. ಪ್ರತಿವರ್ಷವೂ ನಾವು ನೀವೆಲ್ಲರೂ ಇಲ್ಲಿ ಸೇರೋಣ, ಇಂತಹ ಮಹನೀಯರನ್ನು ನೆನೆಯೋಣ” ಎಂದು ಕನ್ನಡಿಗರಲ್ಲಿ ಮನವಿ ಮಾಡಿದರು.

ಪ್ರತಿವರ್ಷ ಈ ಕಾರ್ಯಕ್ರಮಕ್ಕೆ ಅನುವು ಮಾಡಿಕೊಟ್ಟು, ನಮಗೆಲ್ಲರಿಗೂ ಪ್ರೇರಣಾದಾಯಕ ಶಕ್ತಿಯಾಗಿರುವ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ ನಾಡಿನ ಸಮಸ್ತ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸಿದರು.

ಸಂಸತ್ತಿನ ಆವರಣದಲ್ಲಿ ಈ ಕಾರ್ಯಕ್ರಮಕ್ಕೆ ಅನುಮತಿ ನೀಡಿ ಸಹಕರಿಸುತ್ತಿರುವ ಹೆಮ್ಮೆಯ ಲೋಕಸಭಾ ಸ್ಪೀಕರ್ ಶ್ರೀ ಓಂ ಬಿರ್ಲಾ ಅವರಿಗೆ, ಲೋಕಸಭೆ ಮತ್ತು ರೈಲ್ವೆ ಸಚಿವಾಲಯದ ಅಧಿಕಾರಿಗಳಿಗೆ ಹಾಗೂ ರೈಲ್ವೆ ಸಚಿವ ಶ್ರೀ ಅಶ್ವಿನಿ ವೈಷ್ಣವ್ ಅವರಿಗೂ ಸಹ ಅಭಿನಂದನೆ ಸಲ್ಲಿಸಿದರು.

ಸಂಸತ್ತಿನ ಪ್ರೇರಣಾ ಸ್ಥಳದಲ್ಲಿ ಪ್ರತಿವರ್ಷ ಇಂತಹ ಕಾರ್ಯಕ್ರಮವನ್ನು ಆಯೋಜಿಸುತ್ತಿರುವ ಕೇಂದ್ರ ಸಚಿವ ವಿ. ಸೋಮಣ್ಣ ಅವರ ಕಾರ್ಯವೈಖರಿಯ ಬಗ್ಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಪೂಜ್ಯ ಶ್ರೀ ಬಸವ ಮೃತ್ಯುಂಜಯ ಸ್ವಾಮೀಜಿಗಳು ಅತ್ಯಂತ ಹರ್ಷ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *