Friday, 30 October 2026
ತಾಜಾ ಸುದ್ದಿ
ವಿಶ್ವ ಪಾರ್ಶ್ವವಾಯು ದಿನ: ಜಾಗೃತಿ, ಆರಂಭಿಕ ಪತ್ತೆ ಮತ್ತು ಸೂಕ್ತ ಚಿಕಿತ್ಸೆಯಿಂದ ಅಂಗವೈಕಲ್ಯದ ಅಪಾಯ ತಗ್ಗಿಸಬಹುದುಕ್ಯಾಂಡಿ ಕ್ರಷ್‌ನಲ್ಲಿ ಕರ್ನಾಟಕದ ಸೂರ್ಯ ರಾಜ್ ವಿಶ್ವದಾಖಲೆ: 23,585ನೇ ಹಂತ ತಲುಪಿ ಸಾಧನೆಬ್ರಿಟಿಷರ ವಿರುದ್ಧದ ಕಿತ್ತೂರು ರಾಣಿ ಚೆನ್ನಮ್ಮನವರ ವಿಜಯಕ್ಕೆ 202 ವರ್ಷ: ಸಂಸತ್ ಆವರಣದ ಪ್ರೇರಣಾ ಸ್ಥಳದಲ್ಲಿ ಸಂಭ್ರಮದ ಆಚರಣೆವಿಶ್ವ ಥ್ರಾಂಬೋಸಿಸ್ ದಿನ 2026: ಮಹಿಳೆಯರ ಜೀವನದ ಪ್ರತಿ ಹಂತದಲ್ಲೂ ಬದಲಾಗುವ ರಕ್ತ ಹೆಪ್ಪುಗಟ್ಟುವಿಕೆಯ ಅಪಾಯಬೆಂಗಳೂರಿನ ಮೆಡಿಕವರ್ ಆಸ್ಪತ್ರೆಯಲ್ಲಿ ನವಜಾತ ಶಿಶುವಿಗೆ ಮರುಜೀವ: 85 ನಿಮಿಷಗಳಲ್ಲಿ ತುರ್ತು ಸ್ಥಳಾಂತರ, 33 ದಿನಗಳ ಚಿಕಿತ್ಸೆಯ ಬಳಿಕ ಸಂಪೂರ್ಣ ಚೇತರಿಕೆ‘ಕಾಯೋಣ, ನೋಡೋಣ’ ಎನ್ನಬೇಡಿ: ಜ್ವರ, ಕುತ್ತಿಗೆ ಬಿಗಿತ ಮತ್ತು ಅಸಹಜ ನಿದ್ರೆ ಮೆನಿಂಜೈಟಿಸ್‌ನ ಸೂಚನೆಯಾಗಿರಬಹುದುಹೃದಯದ ಆರೋಗ್ಯದತ್ತ ಮತ್ತೊಂದು ಹೆಜ್ಜೆ: ಮೆಡಿಕವರ್ ಆಸ್ಪತ್ರೆಗಳಿಂದ ₹999ಕ್ಕೆ ವಿಶೇಷ ಹಾರ್ಟ್ ಸ್ಕ್ರೀನಿಂಗ್ ಪ್ಯಾಕೇಜ್ಆರೋಗ್ಯಕರ ಹೃದಯಕ್ಕಾಗಿ ಮೆಡಿಕವರ್ ಆಸ್ಪತ್ರೆಯಲ್ಲಿ ‘ಲವ್ ಯುವರ್ ಹಾರ್ಟ್ 2.0’ ವಾಕಥಾನ್ವಿಶ್ವ ಪಾರ್ಶ್ವವಾಯು ದಿನ: ಜಾಗೃತಿ, ಆರಂಭಿಕ ಪತ್ತೆ ಮತ್ತು ಸೂಕ್ತ ಚಿಕಿತ್ಸೆಯಿಂದ ಅಂಗವೈಕಲ್ಯದ ಅಪಾಯ ತಗ್ಗಿಸಬಹುದುಕ್ಯಾಂಡಿ ಕ್ರಷ್‌ನಲ್ಲಿ ಕರ್ನಾಟಕದ ಸೂರ್ಯ ರಾಜ್ ವಿಶ್ವದಾಖಲೆ: 23,585ನೇ ಹಂತ ತಲುಪಿ ಸಾಧನೆಬ್ರಿಟಿಷರ ವಿರುದ್ಧದ ಕಿತ್ತೂರು ರಾಣಿ ಚೆನ್ನಮ್ಮನವರ ವಿಜಯಕ್ಕೆ 202 ವರ್ಷ: ಸಂಸತ್ ಆವರಣದ ಪ್ರೇರಣಾ ಸ್ಥಳದಲ್ಲಿ ಸಂಭ್ರಮದ ಆಚರಣೆವಿಶ್ವ ಥ್ರಾಂಬೋಸಿಸ್ ದಿನ 2026: ಮಹಿಳೆಯರ ಜೀವನದ ಪ್ರತಿ ಹಂತದಲ್ಲೂ ಬದಲಾಗುವ ರಕ್ತ ಹೆಪ್ಪುಗಟ್ಟುವಿಕೆಯ ಅಪಾಯಬೆಂಗಳೂರಿನ ಮೆಡಿಕವರ್ ಆಸ್ಪತ್ರೆಯಲ್ಲಿ ನವಜಾತ ಶಿಶುವಿಗೆ ಮರುಜೀವ: 85 ನಿಮಿಷಗಳಲ್ಲಿ ತುರ್ತು ಸ್ಥಳಾಂತರ, 33 ದಿನಗಳ ಚಿಕಿತ್ಸೆಯ ಬಳಿಕ ಸಂಪೂರ್ಣ ಚೇತರಿಕೆ‘ಕಾಯೋಣ, ನೋಡೋಣ’ ಎನ್ನಬೇಡಿ: ಜ್ವರ, ಕುತ್ತಿಗೆ ಬಿಗಿತ ಮತ್ತು ಅಸಹಜ ನಿದ್ರೆ ಮೆನಿಂಜೈಟಿಸ್‌ನ ಸೂಚನೆಯಾಗಿರಬಹುದುಹೃದಯದ ಆರೋಗ್ಯದತ್ತ ಮತ್ತೊಂದು ಹೆಜ್ಜೆ: ಮೆಡಿಕವರ್ ಆಸ್ಪತ್ರೆಗಳಿಂದ ₹999ಕ್ಕೆ ವಿಶೇಷ ಹಾರ್ಟ್ ಸ್ಕ್ರೀನಿಂಗ್ ಪ್ಯಾಕೇಜ್ಆರೋಗ್ಯಕರ ಹೃದಯಕ್ಕಾಗಿ ಮೆಡಿಕವರ್ ಆಸ್ಪತ್ರೆಯಲ್ಲಿ ‘ಲವ್ ಯುವರ್ ಹಾರ್ಟ್ 2.0’ ವಾಕಥಾನ್
ಆರೋಗ್ಯ

ಹೃದಯದ ಆರೋಗ್ಯದತ್ತ ಮತ್ತೊಂದು ಹೆಜ್ಜೆ: ಮೆಡಿಕವರ್ ಆಸ್ಪತ್ರೆಗಳಿಂದ ₹999ಕ್ಕೆ ವಿಶೇಷ ಹಾರ್ಟ್ ಸ್ಕ್ರೀನಿಂಗ್ ಪ್ಯಾಕೇಜ್

ಬೆಂಗಳೂರು, ಸೆಪ್ಟೆಂಬರ್ 29, 2026: ವಿಶ್ವ ಹೃದಯ ದಿನದ ಅಂಗವಾಗಿ ಮೆಡಿಕವರ್ ಆಸ್ಪತ್ರೆಗಳು, ಬೆಂಗಳೂರು ವತಿಯಿಂದ ಹೃದಯದ ಆರೋಗ್ಯದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ಹೃದಯದ ಆರೋಗ್ಯವನ್ನು ನಿಯಮಿತವಾಗಿ ಪರಿಶೀಲಿಸಿಕೊಳ್ಳುವ ಮಹತ್ವವನ್ನು ಒತ್ತಿಹೇಳಲಾಯಿತು. 2026ರ ವಿಶ್ವ ಹೃದಯ ದಿನದ ಜಾಗತಿಕ ಅಭಿಯಾನವು “Don’t Miss a Beat” ಎಂಬ ಸಂದೇಶದೊಂದಿಗೆ ಹೃದಯ ಸಂಬಂಧಿತ ಕಾಯಿಲೆಗಳ ಲಕ್ಷಣಗಳನ್ನು ನಿರ್ಲಕ್ಷಿಸದಂತೆ ಮತ್ತು ಹೃದಯದ ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ಕರೆ ನೀಡಿತು.

ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಮಾಜಿ ಸಚಿವ ಹಾಗೂ ಮುಖ್ಯ ಅತಿಥಿ ಶ್ರೀ ಅರವಿಂದ ಲಿಂಬಾವಳಿ ಅವರು ಉಪಸ್ಥಿತರಿದ್ದರು.

₹999ಕ್ಕೆ ಸಂಪೂರ್ಣ ಹಾರ್ಟ್ ಸ್ಕ್ರೀನಿಂಗ್ ಪ್ಯಾಕೇಜ್

ವಿಶ್ವ ಹೃದಯ ದಿನದ ಅಂಗವಾಗಿ ಮೆಡಿಕವರ್ ಆಸ್ಪತ್ರೆಗಳು ವಿಶೇಷ Heart Screening Package ಅನ್ನು ಬಿಡುಗಡೆ ಮಾಡಿದ್ದು, ಸಾಮಾನ್ಯವಾಗಿ ₹6,500 ಮೌಲ್ಯದ ಈ ಪ್ಯಾಕೇಜ್ ಅನ್ನು ₹999ಕ್ಕೆ ಪಡೆಯಬಹುದಾಗಿದೆ.

ಪ್ಯಾಕೇಜ್‌ನಲ್ಲಿ:

  • ECG
  • 2D Echo / TMT
  • Lipid Profile
  • Creatinine
  • RBS – Random Blood Sugar
  • Cardiologist Consultation

ಇದರ ಜೊತೆಗೆ 18000 ರಿಂದ 25000ಮೌಲ್ಯದ CT Coronary Angiographyಯನ್ನು ವಿಶೇಷ ಹಾರ್ಟ್ ಡೇ ಆಫರ್ ಅಡಿಯಲ್ಲಿ ₹5,999ಕ್ಕೆ ನೀಡಲಾಗುತ್ತಿದೆ. ಈ ವಿಶೇಷ ಆಫರ್ 31 ಅಕ್ಟೋಬರ್ 2026ರವರೆಗೆ ಲಭ್ಯವಿರಲಿದೆ.

ಕಾರ್ಯಕ್ರಮವನ್ನ ಉದ್ದೇಶಿಸಿ ಮಾತನಾಡಿದ ಮುಖ್ಯ ಅತಿಥಿ ಶ್ರೀ ಅರವಿಂದ ಲಿಂಬಾವಳಿ ಹೃದಯದ ಆರೋಗ್ಯ ಎನ್ನುವುದು ಕೇವಲ ಒಬ್ಬ ವ್ಯಕ್ತಿಯ ಆರೋಗ್ಯಕ್ಕೆ ಸೀಮಿತವಾಗಿಲ್ಲ, ಅದು ಇಡೀ ಕುಟುಂಬದ ಸಂತೋಷ ಮತ್ತು ನೆಮ್ಮದಿಗೆ ಸಂಬಂಧಿಸಿದೆ. ಇತ್ತೀಚಿನ ದಿನಗಳಲ್ಲಿ ಹೃದಯದ ಆರೋಗ್ಯದ ಬಗ್ಗೆ ಯುವಕರು ಸೇರಿದಂತೆ ಎಲ್ಲ ವಯೋಮಾನದವರು ಜಾಗೃತರಾಗುವುದು ಅಗತ್ಯ. ನಿಯಮಿತ ಆರೋಗ್ಯ ತಪಾಸಣೆ, ಉತ್ತಮ ಆಹಾರ ಪದ್ಧತಿ, ದೈಹಿಕ ಚಟುವಟಿಕೆ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ ಹೃದಯವನ್ನು ಕಾಪಾಡಿಕೊಳ್ಳಬಹುದು. ವಿಶ್ವ ಹೃದಯ ದಿನದ ಸಂದರ್ಭದಲ್ಲಿ ಮೆಡಿಕವರ್ ಆಸ್ಪತ್ರೆಗಳು ಕೈಗೊಂಡಿರುವ ಈ ಜಾಗೃತಿ ಕಾರ್ಯಕ್ರಮವು ಜನರಲ್ಲಿ ಹೃದಯದ ಆರೋಗ್ಯದ ಕುರಿತು ಹೆಚ್ಚಿನ ಅರಿವು ಮೂಡಿಸಲಿ ಎಂದು ಆಶಿಸುತ್ತೇನೆ. ನಾನು ಮೆಡಿಕವರ್ ಆಸ್ಪತ್ರೆಯಲ್ಲಿ ಈಗ ತಾನೆ ಹೃದಯ ಪರೀಕ್ಷೆ ಮಾಡಿಕೊಂಡಿರುವೆ ನೀವು ಸಹ ಈ ಆಫರ್ ಸದುಪಯೋಗ ಪಡೆದುಕೊಳ್ಳಿ. ಮೆಡಿಕವರ್ ಆಸ್ಪತ್ರೆಯಿಂದ ಮಹದೇವಪುರದ ಜನರಿಗೆ ಎರಡು ಅಂಬ್ಯೂಲೆನ್ಸ್ ಉಚಿತವಾಗಿ ನೀಡಿದ್ದು, ಮುಂದಿನ ದಿನಗಳಲ್ಲಿ ಮತ್ತೆ ಮೂರು ಉಚಿತ ಅಂಬ್ಯೂಲೆನ್ಸ್ ನೀಡಲು ಘೋಷಣೆ ಮಾಡಿರೋದು ತುಂಬಾ ಸಂತೋಷದ ಸಂಗತಿ ಎಂದರು.

ಇನ್ನು ಇದೇ ವೇಳೆ ಸಿದ್ದಾರೆಡ್ಡಿ, ಪ್ರಾದೇಶಿಕ ನಿರ್ದೇಶಕರು, ಮೆಡಿಕವರ್ ಆಸ್ಪತ್ರೆ, ಇವರು ಮಾತನಾಡಿ ಹೃದಯ ಸಂಬಂಧಿತ ಸಮಸ್ಯೆಗಳು ಕಾಣಿಸಿಕೊಂಡ ನಂತರ ಚಿಕಿತ್ಸೆ ಪಡೆಯುವುದಕ್ಕಿಂತ, ಅವುಗಳನ್ನು ಆರಂಭದಲ್ಲೇ ಗುರುತಿಸಿ ಸೂಕ್ತ ಮುನ್ನೆಚ್ಚರಿಕೆ ವಹಿಸುವುದು ಅತ್ಯಂತ ಮುಖ್ಯ. ಇಂದಿನ ಜೀವನಶೈಲಿ, ಒತ್ತಡ, ಆಹಾರ ಪದ್ಧತಿ ಹಾಗೂ ಇತರ ಅಪಾಯಕಾರಿ ಅಂಶಗಳಿಂದಾಗಿ ಹೃದಯದ ಆರೋಗ್ಯದ ಬಗ್ಗೆ ಪ್ರತಿಯೊಬ್ಬರೂ ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ. ವಿಶ್ವ ಹೃದಯ ದಿನದ ಸಂದರ್ಭದಲ್ಲಿ ಮೆಡಿಕವರ್ ಆಸ್ಪತ್ರೆಗಳು ಆರಂಭಿಸಿರುವ ಈ ವಿಶೇಷ ಹಾರ್ಟ್ ಸ್ಕ್ರೀನಿಂಗ್ ಪ್ಯಾಕೇಜ್ ಮೂಲಕ ಜನರು ತಮ್ಮ ಹೃದಯದ ಆರೋಗ್ಯವನ್ನು ಪರಿಶೀಲಿಸಿಕೊಳ್ಳಲು ಪ್ರೋತ್ಸಾಹಿಸುವುದು ನಮ್ಮ ಉದ್ದೇಶ. ‘ತಡೆಗಟ್ಟುವಿಕೆ ಮತ್ತು ಆರಂಭಿಕ ಪತ್ತೆ’ ಮೂಲಕ ಆರೋಗ್ಯಕರ ಹೃದಯದತ್ತ ಪ್ರತಿಯೊಬ್ಬರೂ ಹೆಜ್ಜೆ ಇಡಬೇಕು ಎಂದರು.

ಮೆಡಿಕವರ್ ಆಸ್ಪತ್ರೆಗಳ ತಜ್ಞ ವೈದ್ಯರಾದ ನಾಗ ಶ್ರೀನಿವಾಸ್ ಮತ್ತು ಡಾ ಮೇಜರ್ ಜಯಪ್ರಸಾದ್ ಮಾತನಾಡಿ, ಎದೆನೋವು, ಉಸಿರಾಟದ ತೊಂದರೆ, ಅತಿಯಾದ ದಣಿವು, ಹೃದಯ ಬಡಿತದಲ್ಲಿ ಅಸಹಜತೆ ಮುಂತಾದ ಲಕ್ಷಣಗಳನ್ನು ನಿರ್ಲಕ್ಷಿಸದೆ ಸೂಕ್ತ ವೈದ್ಯಕೀಯ ಸಲಹೆ ಪಡೆಯುವಂತೆ ಸಾರ್ವಜನಿಕರಿಗೆ ಸಲಹೆ ನೀಡಿದರು.

Leave a Reply

Your email address will not be published. Required fields are marked *