Monday, 31 August 2026
ತಾಜಾ ಸುದ್ದಿ
ನವಜಾತ ಶಿಶುಗಳ ಮೆದುಳಿನ ರಕ್ಷಣೆಗೆ ‘ಥೆರಪ್ಯೂಟಿಕ್ ಹೈಪೋಥರ್ಮಿಯಾ’ ಸೌತ್ ನಿಯೋಕಾನ್ ೨೦೨೬ ಕಾರ್ಯಾಗಾರಮೆಡಿಕವರ್ ಆಸ್ಪತ್ರೆಯಲ್ಲಿ ಅಪೆಂಡಿಕ್ಸ್‌ನ ಅಪರೂಪದ ಮ್ಯೂಸಿನಸ್ ಟ್ಯೂಮರ್‌ಗೆ ಅತ್ಯಾಧುನಿಕ ಶಸ್ತ್ರಚಿಕಿತ್ಸೆ ಯಶಸ್ವಿವಿಶ್ವ ಅಂಗಾಂಗ ದಾನ ದಿನಾಚರಣೆ: ಅಂಗಾಂಗ ದಾನದಿಂದ ಹಲವು ಜೀವಗಳಿಗೆ ಹೊಸ ಬದುಕು – ಮೆಡಿಕವರ್ ಆಸ್ಪತ್ರೆಮೆಡಿಕವರ್ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಅತ್ಯಾಧುನಿಕ ವಾಟರ್ ಬರ್ತಿಂಗ್ ಸೂಟ್ ಲೋಕಾರ್ಪಣೆಮೆಡಿಕವರ್ ಆಸ್ಪತ್ರೆಯಲ್ಲಿ 100ನೇ ರೋಬೋಟಿಕ್ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ ಯಶಸ್ವಿಮೆಡಿಕವರ್ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಕೀಹೋಲ್ ಶಸ್ತ್ರಚಿಕಿತ್ಸೆಯ ಮೂಲಕ ಮೂತ್ರಪಿಂಡದ ಕ್ಯಾನ್ಸರ್‌ಗೆ ಯಶಸ್ವಿ ಚಿಕಿತ್ಸೆಮಕ್ಕಳ ಶ್ರವಣ ದೋಷವನ್ನು ನಿರ್ಲಕ್ಷಿಸಬೇಡಿ: ಆರಂಭಿಕ ತಪಾಸಣೆಯೇ ಉತ್ತಮ ಭವಿಷ್ಯಕ್ಕೆ ಅಡಿಪಾಯಎಸ್‌ಎಂವಿಟಿ ರೈಲ್ವೆ ನಿಲ್ದಾಣದಲ್ಲಿ ಮೆಡಿಕವರ್ ಆಸ್ಪತ್ರೆಯಿಂದ 24×7 ಉಚಿತ ಆಂಬ್ಯುಲೆನ್ಸ್ ಸೇವೆ ಆರಂಭನವಜಾತ ಶಿಶುಗಳ ಮೆದುಳಿನ ರಕ್ಷಣೆಗೆ ‘ಥೆರಪ್ಯೂಟಿಕ್ ಹೈಪೋಥರ್ಮಿಯಾ’ ಸೌತ್ ನಿಯೋಕಾನ್ ೨೦೨೬ ಕಾರ್ಯಾಗಾರಮೆಡಿಕವರ್ ಆಸ್ಪತ್ರೆಯಲ್ಲಿ ಅಪೆಂಡಿಕ್ಸ್‌ನ ಅಪರೂಪದ ಮ್ಯೂಸಿನಸ್ ಟ್ಯೂಮರ್‌ಗೆ ಅತ್ಯಾಧುನಿಕ ಶಸ್ತ್ರಚಿಕಿತ್ಸೆ ಯಶಸ್ವಿವಿಶ್ವ ಅಂಗಾಂಗ ದಾನ ದಿನಾಚರಣೆ: ಅಂಗಾಂಗ ದಾನದಿಂದ ಹಲವು ಜೀವಗಳಿಗೆ ಹೊಸ ಬದುಕು – ಮೆಡಿಕವರ್ ಆಸ್ಪತ್ರೆಮೆಡಿಕವರ್ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಅತ್ಯಾಧುನಿಕ ವಾಟರ್ ಬರ್ತಿಂಗ್ ಸೂಟ್ ಲೋಕಾರ್ಪಣೆಮೆಡಿಕವರ್ ಆಸ್ಪತ್ರೆಯಲ್ಲಿ 100ನೇ ರೋಬೋಟಿಕ್ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ ಯಶಸ್ವಿಮೆಡಿಕವರ್ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಕೀಹೋಲ್ ಶಸ್ತ್ರಚಿಕಿತ್ಸೆಯ ಮೂಲಕ ಮೂತ್ರಪಿಂಡದ ಕ್ಯಾನ್ಸರ್‌ಗೆ ಯಶಸ್ವಿ ಚಿಕಿತ್ಸೆಮಕ್ಕಳ ಶ್ರವಣ ದೋಷವನ್ನು ನಿರ್ಲಕ್ಷಿಸಬೇಡಿ: ಆರಂಭಿಕ ತಪಾಸಣೆಯೇ ಉತ್ತಮ ಭವಿಷ್ಯಕ್ಕೆ ಅಡಿಪಾಯಎಸ್‌ಎಂವಿಟಿ ರೈಲ್ವೆ ನಿಲ್ದಾಣದಲ್ಲಿ ಮೆಡಿಕವರ್ ಆಸ್ಪತ್ರೆಯಿಂದ 24×7 ಉಚಿತ ಆಂಬ್ಯುಲೆನ್ಸ್ ಸೇವೆ ಆರಂಭ
ಆರೋಗ್ಯ

ಮೆಡಿಕವರ್ ಆಸ್ಪತ್ರೆಯಲ್ಲಿ ಬೃಹತ್ 40 ಸೆಂ.ಮೀ. ಗಾತ್ರ ಹಾಗೂ 4.5 ಕೆ.ಜಿ. ತೂಕದ ಎರಡೂ ಬೃಹತ್ ಮೂತ್ರಪಿಂಡಗಳ ಯಶಸ್ವಿ ಶಸ್ತ್ರಚಿಕಿತ್ಸೆ

ಬೆಂಗಳೂರು, ಜೂನ್ 29: ಮೆಡಿಕವರ್ ಆಸ್ಪತ್ರೆಯ ಡಾ ಮಹದೇವ್ ದೇಸಾಯಿ ಮತ್ತು ಡಾ ದಿಲೀಪ್ ನೇತೃತ್ವದ ತಜ್ಞ ವೈದ್ಯರ ತಂಡವು ಅಪರೂಪದ ಹಾಗೂ ಅತ್ಯಂತ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿದ್ದಾರೆ. 47 ವರ್ಷದ ರೋಗಿಯ ಎರಡೂ ಅಸಾಮಾನ್ಯವಾಗಿ ದೊಡ್ಡದಾಗಿದ್ದ ಮೂತ್ರಪಿಂಡಗಳನ್ನು (Kidneys) ಸುರಕ್ಷಿತವಾಗಿ ತೆರವುಗೊಳಿಸಿದೆ.

ರೋಗಿಯು ಆಟೋಸೋಮಲ್ ಡಾಮಿನೆಂಟ್ ಪಾಲಿಸಿಸ್ಟಿಕ್ ಕಿಡ್ನಿ ಡಿಸೀಸ್ (ADPKD) ಎಂಬ ಅಪರೂಪದ ಅನುವಂಶಿಕ ಕಾಯಿಲೆಯಿಂದ ಕಳೆದ 12 ವರ್ಷಗಳಿಂದ ಬಳಲುತ್ತಿದ್ದು, ಕಳೆದ ಎರಡು ವರ್ಷಗಳಿಂದ ಅಂತಿಮ ಹಂತದ ಮೂತ್ರಪಿಂಡ ವೈಫಲ್ಯ (End Stage Renal Disease) ಕಾರಣ ನಿಯಮಿತ ಹೀಮೋಡಯಾಲಿಸಿಸ್ ಪಡೆಯುತ್ತಿದ್ದರು. ಕುಟುಂಬದಲ್ಲಿಯೂ ಈ ಕಾಯಿಲೆಯ ಹಿನ್ನೆಲೆ ಇದ್ದು, ರೋಗಿಯ ಸಹೋದರ ಇದೇ ಕಾಯಿಲೆಯಿಂದ ಮೃತಪಟ್ಟಿದ್ದರು.

ಕಳೆದ ಕೆಲವು ತಿಂಗಳುಗಳಿಂದ ರೋಗಿಗೆ ಮರುಕಳಿಸುವ ಕಿಡ್ನಿ ಸಿಸ್ಟ್ ಸೋಂಕು, ಸಿಸ್ಟ್‌ಗಳಲ್ಲಿ ರಕ್ತಸ್ರಾವ ಹಾಗೂ ತೀವ್ರ ಜ್ವರ ಕಾಣಿಸಿಕೊಂಡಿತ್ತು. ಹಲವು ಔಷಧಿಗಳ ಚಿಕಿತ್ಸೆಯ ಬಳಿಕವೂ ಸೋಂಕು ನಿಯಂತ್ರಣಕ್ಕೆ ಬಾರದ ಕಾರಣ ಶಸ್ತ್ರಚಿಕಿತ್ಸೆ ಅನಿವಾರ್ಯವಾಯಿತು.

ಮೆಡಿಕವರ್ ಆಸ್ಪತ್ರೆಯ ಯೂರಾಲಜಿ ವಿಭಾಗದ ಡಾ. ದಿಲೀಪ್ ಮತ್ತು ಅವರ ತಂಡ ಅತ್ಯಂತ ಸಂಕೀರ್ಣವಾದ ದ್ವಿಪಕ್ಷೀಯ ನೆಫ್ರೆಕ್ಟಮಿ (Bilateral Nephrectomy) ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದರು.

ಶಸ್ತ್ರಚಿಕಿತ್ಸೆಯ ವೇಳೆ ಮೂತ್ರಪಿಂಡಗಳನ್ನು ತೆರವುಗೊಳಿಸಿದ ನಂತರ ರೋಗಿಯಲ್ಲಿ ತೀವ್ರ ರಕ್ತದೊತ್ತಡ ಕುಸಿತ (Severe Hypotension) ಉಂಟಾದರೂ, ವೈದ್ಯರ ತಂಡ ಮುಂಚಿತ ಸಿದ್ಧತೆಯೊಂದಿಗೆ ಅದನ್ನು ಸಮರ್ಥವಾಗಿ ನಿರ್ವಹಿಸಿತು. ರೋಗಿಗೆ ಬಹು ಪ್ರಮಾಣದ ರಕ್ತ ವರ್ಗಾವಣೆ (Multiple Blood Transfusions) ಹಾಗೂ ಮೂರು ವಿಧದ ವಾಸೋಪ್ರೆಸರ್ ಔಷಧಿಗಳ ಸಹಾಯದಿಂದ ಸ್ಥಿರ ಸ್ಥಿತಿಗೆ ತರಲಾಯಿತು.


ಶಸ್ತ್ರಚಿಕಿತ್ಸೆಯಲ್ಲಿ ತೆರವುಗೊಳಿಸಿದ ಪ್ರತಿಯೊಂದು ಮೂತ್ರಪಿಂಡವು ಸುಮಾರು 40 ಸೆಂ.ಮೀ. ಉದ್ದ ಹಾಗೂ 4.5 ಕೆ.ಜಿ.ಗಿಂತ ಹೆಚ್ಚು ತೂಕ ಹೊಂದಿದ್ದು, ಸಾಮಾನ್ಯ ಮೂತ್ರಪಿಂಡದ ಗಾತ್ರ (9–12 ಸೆಂ.ಮೀ.) ಮತ್ತು ತೂಕ (125–175 ಗ್ರಾಂ)ಕ್ಕೆ ಹೋಲಿಸಿದರೆ ಹಲವು ಪಟ್ಟು ದೊಡ್ಡದಾಗಿತ್ತು

ಮೂತ್ರಪಿಂಡಗಳ ಒಳಭಾಗವು ಅನೇಕ ಸಿಸ್ಟ್‌ಗಳಿಂದ ಸಂಪೂರ್ಣ ಆವರಿಸಿಕೊಂಡಿದ್ದು, ಅವುಗಳಲ್ಲಿ ರಕ್ತಸ್ರಾವವೂ ಕಂಡುಬಂದಿತ್ತು.

ಈ ಕುರಿತು ಮಾತನಾಡಿದ ಡಾ. ಮಾಧವ ದೇಸಾಯಿ ಅವರು, “ADPKD ರೋಗಿಗಳಲ್ಲಿ ಸೋಂಕು, ರಕ್ತಸ್ರಾವ ಅಥವಾ ತೀವ್ರ ನೋವಿನಂತಹ ತೊಂದರೆಗಳು ಕಾಣಿಸಿಕೊಂಡಾಗ ಸಮಯೋಚಿತ ಚಿಕಿತ್ಸೆ ಹಾಗೂ ಅಗತ್ಯವಿದ್ದಲ್ಲಿ ಶಸ್ತ್ರಚಿಕಿತ್ಸೆ ಜೀವ ಉಳಿಸಲು ಅತ್ಯಂತ ಮುಖ್ಯವಾಗುತ್ತದೆ. ಇಂತಹ ಅಪರೂಪದ ಹಾಗೂ ಸಂಕೀರ್ಣ ಪ್ರಕರಣಗಳನ್ನು ಯಶಸ್ವಿಯಾಗಿ ನಿರ್ವಹಿಸುವಲ್ಲಿ ಬಹುಶಾಖಾ ತಜ್ಞರ ಸಮನ್ವಯ ಅತ್ಯಗತ್ಯ,” ಎಂದು ಹೇಳಿದರು.

ಡಾ ದಿಲೀಪ್ ಮಾತನಾಡಿ ನನ್ನ ವೃತ್ತಿಜೀವನದಲ್ಲೆ ಈ ತರ ಪ್ರಕರಣ ಮೊದಲನೆಯದು. ಜೊತೆಗೆ ಒಬ್ಬ ವೈದ್ಯರಿಗೆ ವೃತ್ತಿ ಜೀವನಲ್ಲಿ ಒಂದು ಬಾರಿ ಮಾತ್ರ ಈ ರೀತಿಯ ಪ್ರಕರಣ ಸಿಗೋದು, ಅದನ್ನ ಮೆಡಿಕವರ್ ಆಸ್ಪತ್ರೆಯ ತಂಡ ಯಶಸ್ವಿಯಾಗಿ ನಡೆಸಿದೆ. ಈ ಯಶಸ್ವಿ ಶಸ್ತ್ರಚಿಕಿತ್ಸೆಯು ಮೆಡಿಕವರ್ ಆಸ್ಪತ್ರೆಯ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳು ಹಾಗೂ ತಜ್ಞ ವೈದ್ಯರ ಅನುಭವಕ್ಕೆ ಮತ್ತೊಂದು ಮೈಲಿಗಲ್ಲಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ರು.

Leave a Reply

Your email address will not be published. Required fields are marked *